ವಿದ್ಯಾರ್ಥಿಗಳು ಸದಾ ಯಶಸ್ಸುಗಳಿಸಲು ಕನಸು ಕಾಣುತ್ತಿರಬೇಕು. ಕನಸು ಕಾಣುವುದರೊಂದಿಗೆ ಸಾಧನೆ ಮಾಡುವ ಸಂಕಲ್ಪ ಮಾಡಬೇಕು ಎಂದು ಶಾಸಕ ಡಿ.ಕೆ. ಶಿವಕುಮಾರ್ ಕರೆ ನೀಡಿದರು.ಪಟ್ಟಣದ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಎಸ್‌ಎಸ್‌ಎಲ್ಸಿ ಮುಗಿದ ಮೇಲೆ ೬ ವರ್ಷ ಶ್ರಮ ಪಟ್ಟರೆ ೬೦ ವರ್ಷದವರೆಗೆ ಆರಾಮವಾಗಿ ಜೀವನ ಸಾಗಿಸಬಹುದು ಎಂದು ಕಿವಿಮಾತು ಹೇಳಿದರು.ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯತೆ ಅಳವಡಿಸಿಕೊಂಡರೆ ಸುಲಭವಾಗಿ ಉದ್ಯೋಗ ಸಿಗುತ್ತವೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲೀಷ್ ಭಾಷೆಯಲ್ಲಿ ಹಿಂದಿದ್ದಾರೆ. ಅವರನ್ನು ಮೇಲೆತ್ತುವ ಕೆಲಸವಾಗಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಭಾಷೆಯ ಪ್ರೌಢಿಮೆ ಇದ್ದರಿಂದ ತಾವು ೩ ಮುಖ್ಯಮಂತ್ರಿಗಳ ಬಳಿ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಅವಕಾಶ ದೊರಕಿತು ಎಂದು ತಿಳಿಸಿದರು.ತಾಪಂ ಮಾಜಿ ಅಧ್ಯಕ್ಷೆ ಸುಕನ್ಯ ಮಾತನಾಡಿ, ಶಿಕ್ಷಣದಿಂದ ಸವಾಲುಗಳನ್ನು ಎದುರಿಸಲು ಸಾಧ್ಯ. ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಗಳಾದ ಬಸವರಾಜು, ಬಿ. ಶಿವರಾಮು, ದಾ಼?ಯಿಣಿ, ಎಸ್. ರವಿ, ದಿಲೀಪ್,ಡಿ.ಶಿವಕುಮಾರ್, ಆರ್. ಕೃಷ್ಣಮೂರ್ತಿ, ಮರಿದೇವರು, ಇಕ್ಬಾಲ್ ಹುಸೇನ್, ಸವಿತ ಸುರೇಶ್ ಇತರರಿದ್ದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಗಳಾದ ಬಸವರಾಜು, ಬಿ. ಶಿವರಾಮು, ದಾ಼?ಯಿಣಿ, ಎಸ್. ರವಿ, ದಿಲೀಪ್,ಡಿ.ಶಿವಕುಮಾರ್, ಆರ್. ಕೃಷ್ಣಮೂರ್ತಿ, ಮರಿದೇವರು, ಇಕ್ಬಾಲ್ ಹುಸೇನ್, ಸವಿತ ಸುರೇಶ್ ಇತರರಿದ್ದರು.
No comments:
Post a Comment